“ಬಾಡಿಗೆ” ( ಪ್ರಜಾವಾಣಿಯ ಭಾನುವಾರದ ಪುರವಣಿಯಲ್ಲಿ ೨೫.೦೪.೨೦೨೦ ರಂದು ಪ್ರಕಟಿತ ) " ರೇಣುಕಾ ಹೇಂಗಿದ್ದಾಳೇ ? ಈಗ ಐದು ಮುಗಿದು ಆರನೇ ತಿಂಗಳು ಶುರು ಆಯ್ತಲ್ವೆ ? ಇಷ್ಟೊತ್ತೀಗಾಗ್ಲೆ ಗರ್ಭದಲ್ಲಿ ಶಿಶು ಮಿಸುಕಾಡೋಕೆಆರಂಭವಾಗಿರಬೇಕು , ಸಮಯಕ್ಕೆ ಸರಿಯಾಗಿ ಊಟ-ತಿಂಡಿ ತಿಂತಾಳಾ ? ಟಾನಿಕ್ಕು-ಔಷಧಿ ಎಲ್ಲ ಸರಿಯಾಗಿ ತಗೋ ಅಂತ ಹೇಳು ಅವ್ಳಿಗೆ." ಫೋನಿನಲ್ಲಿ ಮಗಳು ಹೀಗೆ ಒಂದೇ ಸಮನೇ ವಟಗುಟ್ಟುತ್ತಾ ಇರೋದು ಶಾರದಮ್ಮನಿಗೆ ತೆಲೆಬಿಸಿ ಉಂಟು ಮಾಡಿತು. " ಅಯ್ಯೋ ಮಹರಾಯ್ತಿ ! ಕೊಂಚ ನನಗೂ ಮಾತಾಡೋಕೆ ಅವಕಾಶ ಕೊಡು. ಹಾಂ! ರೇಣುಕಾ ಆರಾಮಾಗಿದ್ದಾಳೆ. ಮಗು ಈಗಾಗಲೇ ಗರ್ಭದಲ್ಲಿ ಮಿಸುಕಾಡಲು ಶುರುವಾಗಿದೆ. ನಾನೂ ಡಾಕ್ಟ್ರೇ ಅಲ್ವಾ ? ಅವಳಿಗೆ ಕಾಲ-ಕಾಲಕ್ಕೆ ಊಟ - ಔಷಧಿ ಅಂತೆಲ್ಲ ನಾನೇ ಎಲ್ಲಾನೂ ನೋಡ್ಕೋತೀನಿ. ನೀನೇನೂ ಚಿಂತೆ ಮಾಡ್ಬೇಡ" ಎಂದು ಉತ್ತರಿಸಿದರು. ಅದಕ್ಕೆ ಶಾರದಮ್ಮನ ಮಗಳು ಸುಧಾ "ನಂಗೊತ್ತಮ್ಮಾ ನೀನೂ ಡಾಕ್ಟ್ರು ಅನ್ನೋದು. ನಾನೂ ನಿನ್ನ ಮಗಳು ಮಾತ್ರ ಅಲ್ಲ , ಹೆಸರಾಂತ ಪ್ರಸೂತಿ ತಜ್ಞೆ ಅನ್ನೋದು ನಿನಗೂ ನೆನಪಿರಲಿ. ಅದೂ ಅಲ್ದೇಇಲ್ಲಿ ನನ್ನ ಗೆಳತಿ ಆರತಿ ‘ ನನ್ನ ಮಗು ಹೇಗಿದೆ ’ ನನ್ನ ಜೀವ ತಿಂತಿರೋ ಹೊತ್ಗೆ ನಾನು ನಿನಗೆ ಹೀಗೆ ಫೋನ್ ಮಾಡಿ ಪದೇ-ಪದೇ ಕೇಳಬೇಕಾಗಿದೆ. ಆಯ್ತು ! ರೇಣುಕಾಳನ್ನ ಹುಷಾರಾಗಿ ನೋಡ್ಕೋ ಬೈ " ಎಂದು ಕರೆ ತುಂಡರಿಸಿದಳು. ಶಾರದಮ್ಮ ಮಗಳ ಧ...
Posts
Showing posts from June, 2025